
5th August 2025
ನೇಗಿನಹಾಳ: ಎಲ್ಲ ಮಹಾತ್ಮರನ್ನು, ಹೋರಾಟಗಾರರನ್ನು ಕೇವಲ ಮೂರ್ತಿಗಳಾಗಿ ಮಾಡಿ ಅವರನ್ನ ದೇವರನ್ನಾಗಿ ಮಾಡುವುದರಿಂದ ಅವರ ಪರಿಶ್ರಮ, ಅವರ ಸೈದ್ಧಾಂತಿಕ ನಿಲವುಗಳು, ವೈಚಾರಿಕ ಚಿಂತನೆಗಳು ಮರೆಮಾಚುತ್ತಿವೆ, ಇಂದು ಮಹಾತ್ಮರ ಮೂರ್ತಿಗಳು ಕೇವಲ ಜಾತಿಗೆ ಸೀಮಿತ ಮಾಡಿ ಅವರ ಸಾಮಾಜಿಕ ನ್ಯಾಯಕ್ಕೆ ಬೆಲೆಯಿಲ್ಲದಂತಾಗುತ್ತಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರು ಈ ದೇಶದ ಅಂತರ ಶಕ್ತಿಗಳು ಇವರು ಸಮಾಜದಲ್ಲಿನ ಅಂದಕಾರ, ಅಜ್ಞಾನ, ಮೂಡನಂಭಿಕೆ, ಜಾತಿ ಅಸಮತೋಲನವನ್ನು ಹೋಗಲಾಡಿಸಲು ಶ್ರಮಿಸಿದವರು ಎಂದು ಬೈಲೂರ ನಿಷ್ಕಲ ಮಂಟಪದ ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಹೇಳಿದರು.
ಗ್ರಾಮದ ಅಂಬೇಡ್ಕರ್ ಭವನದ ಹತ್ತಿರ ನೂತನವಾಗಿ ನಿರ್ಮಾಣಗೊಂಡಿರುವ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಯ ಲೋಕಾರ್ಪಣೆಗೊಳಿಸಿ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದ ಅವರು ಈ ದೇಶದಲ್ಲಿನ ರಾಜಪ್ರಭುತ್ವದಿಂದ ಮುಕ್ತಿಗೊಳಿಸಿ ಸರ್ವರೂ ಸಮಾನತೆಯನ್ನು ತರುವುದರ ಜೊತೆಗೆ ದೀನ-ದಲಿತರ ಹಕ್ಕಿಗಾಗಿ ಅಂಬೇಡ್ಕರ್ ಸಂವಿದಾನ ದಾರಿದೀಪವಾಗಿದೆ ಎಂದರು. ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಬಿ.ಜೆ.ಪಿ ಪಕ್ಷದ ಮಹಿಳಾ ನಾಯಕಿ ಲಕ್ಷಿö್ಮÃ ಇನಾಮದಾರ, ಪ್ರಶಾಂತರಾವ್ ಐಹೊಳೆ, ಮಂಜುನಾಥ ಶಿಡ್ಲೆವ್ವಗೊಳ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನಾನಾಸಾಹೇಬ ಪಾಟೀಲ, ಮಹಾದೇವಿ ಕೋಟಗಿ, ಮಹಾಂತೇಶ ಪಾಶ್ಚಾಪೂರ ಮಡಿವಾಳಪ್ಪ ವಣ್ಣೂರ, ಚೈತನ ಎಮ್ಮಿ, ಮಲ್ಲೇಶ ಭೂತಾಳಿ, ಪ್ರಕಾಶ ಕೆಂಗೇರಿ ಪ್ರವೀಣ ಮಾದರ, ಮಾರುತಿ ಕೆಳಗೇರಿ, ರಮೇಶ ಹಂಚಿನಮನಿ, ಸಂಜು ಮುರಗೋಡ, ಹಾಗೂ ಯುವ ಕರ್ನಾಟಕ ಭೀಮ್ ಸೇನೆ, ಯುವ ಶಕ್ತಿ ಸಂಘದ ಪಧಾಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರು, ದಲಿತ ಸಮಾಜದ ಮುಖಂಡರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸೂತ್ತಮೂತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಸಂತೋಷ ಚೀಟಿನ ಸ್ವಾಗತಿಸಿ, ನಿರೂಪಿಸಿದರು,
ನೇಗಿನಹಾಳ ಗ್ರಾಮದ ಅಂಬೇಡ್ಕರ್ ಸಮುದಾಯ ಭವನ ಹತ್ತಿರ ನೂತನವಾಗಿ ನಿರ್ಮಾಣಗೊಂಡ ಸಂವಿದಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ನೂತನ ಮೂರ್ತಿಯನ್ನು ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳ ಸಾನಿದ್ಯದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಲೋಕಾರ್ಪಣೆಗೊಳಿಸಿದರು.
ಕೊಪ್ಪಳ ಖಾದಿ ಉತ್ಸವ ಮೂರು ದಿನದಲ್ಲಿ ಏಳು ಸಾವಿರ ಜನ ಭೇಟಿ:21.84 ಲಕ್ಷ ವಸ್ತುಗಳು ಮಾರಾಟ